ಮೊಳಕಾಲ್ಮೂರು : ನಕಲಿ ವೈದ್ಯನ ಮನೆಯ ಮೇಲೆ ತಹಶೀಲ್ದಾರ್ ದಾಳಿ ನಡೆಸಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಕೊನಸಾಗರ ಗ್ರಾಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ವೈದ್ಯನ ಮನೆಯ ಮೇಲೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಆಂಧ್ರ ಮೂಲದ ಸುರೇಶ್ ಎಂಬ ನಕಲಿ ವೈದ್ಯ ಹಲವು ದಿನಗಳಿಂದ ಗ್ರಾಮದಲ್ಲಿ ನಾನು ಡಾಕ್ಟರ್ ಎಂದು ಜನರಿಗೆ ಸುಳ್ಳು ಹೇಳಿ ಚಿಕಿತ್ಸೆ ನೀಡುತಿದ್ದನು. ಖಚಿತ ಮಾಹಿತಿ ಮೇರೆಗೆ ಮಾಹಿತಿ ಪಡೆದ ತಹಶೀಲ್ದಾರ್ ನಕಲಿ ವೈದ್ಯನ ಮೇಲೆ ದಾಳಿ ನಡೆಸಿ ಆತನಂದಿನಿಂದ ವಿವಿಧ ಮಾತ್ರೆಗಳು, ಇಂಜೆಕ್ಷನ್, ಸಿರೆಂಜ್ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿ ವೇಳೆ ತಾಲೂಕು ವೈದ್ಯಾಧಿಕಾರಿ ಸುಧಾಮಣಿ ಮತ್ತು ಪೋಲಿಸರು ದಾಳಿಯಲ್ಲಿ ಜೊತೆಗೂಡಿದ್ದರು ಎನ್ನಲಾಗಿದೆ. ನಕಲಿ ವೈದ್ಯ ಸುರೇಶ್ ವಿರುದ್ಧ ಮೊಳಕಾಲ್ಮೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.