ಸಂಸದರಿಗೆ ಕೇಂದ್ರ ಸಚಿವ ಸ್ಥಾನ, ಕಾರ್ಯಕರ್ತೆಯರ ಸಂಭ್ರಮಾಚರಣೆ.

ಹಿರಿಯೂರು: ಚಿತ್ರದುರ್ಗದ ಸಂಸದ ಎ.ನಾರಾಯಣ ಸ್ವಾಮಿ ರವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದ ಹಿನ್ನಲೆಯಲ್ಲಿ ಹಿರಿಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದ ಡಾ: ರಾಜ್ ಕುಮಾರ್ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಕಾರ್ಯಕರ್ತ ಎಂ.ಎಸ್. ರಾಘವೇಂದ್ರ,ಸಂಸದರಾದ ಎ.ನಾರಾಯಣ ಸ್ವಾಮಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಆದರೂ ಅವರ ಕಾರ್ಯ ವೈಖರಿ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ದತೆ ಹಾಗೂ ಅವರಿಗಿರುವ ಪಕ್ಷ ನಿಷ್ಠೆಗೆ ಸಹಜವಾಗಿ ಕೇಂದ್ರ ಸಚಿವ ಸ್ಥಾನ ಲಭಿಸಿದೆ ” ಎಂದರು. ” ಪ್ರಧಾನಿ ನರೇಂದ್ರ ಮೋದಿಜೀರವರ ಏಳು ವರ್ಷಗಳ ಆಡಳಿತದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ದೇಶವನ್ನು ಮುನ್ನೆಡಿಸುತ್ತಿದ್ದಾರೆ ಅವರ ಅಡಿಯಲ್ಲಿ ನಾರಾಯಣ ಸ್ವಾಮಿಯಂತಹ ದಕ್ಷರು ಸಚಿವ ಸ್ಥಾನ ಅಲಂಕರಿಸಿ ತಾಯಿ ಭಾರತಾಂಬೆಯ ಸೇವೆಗೆ ಹೆಚ್ಚಿನ ಜವಾಬ್ದಾರಿ ಸಿಕ್ಕಿರುವುದು ಚಿತ್ರದುರ್ಗ ಲೋಕ ಸಭಾ ಜನತೆಗೆ ಸಂದ ಗೌರವ ಆಗಿದೆ ” ಎಂದರು.
ಬಿಜೆಪಿ ನಗರ ಅಧ್ಯಕ್ಷ ಚಂದ್ರಹಾಸ್ ಮಾತನಾಡಿ, ಎ.ನಾರಾಯಣ ಸ್ವಾಮಿ ರವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದರ ಮೂಲಕ ಸಾಮಾನ್ಯ ಕಾರ್ಯಕರ್ತರಿಗೂ ಕೂಡ ಮಹತ್ತರವಾದ ಅವಕಾಶ ದೊರಕಲಿದೆ ಎಂದು ಮತ್ತೊಮ್ಮೆ ಬಿಜೆಪಿ ಸಾಬೀತು ಪಡಿಸಿದೆ ” ಎಂದರು. ಭದ್ರ ಯೋಜನೆ,ನೇರ ರೈಲು ಮಾರ್ಗದಂತಹ ಅನೇಕ ಯೋಜನೆಗಳ ಅನುಷ್ಠಾನಕ್ಕೆ ವೇಗ ದೊರೆಯಲಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾರಾಯಣ ಸ್ವಾಮಿ ರವರಿಂದ ಸಾಕಾರಗೊಳ್ಳಲಿದೆ ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಕೇಶವ ಮೂರ್ತಿ, ಮಂಡಲ ಖಜಾಂಚಿ ಹೆಚ್. ವೆಂಕಟೇಶ್,ಮಾಜಿ ಅಧ್ಯಕ್ಷ ಎಂ.ವಿ.ಹರ್ಷ, ಎ.ರಾಘವೇಂದ್ರ,ಗೋವಿಂದ ಸಿಂಗ್, ಶಶಿ ಬಬ್ಬೂರು,ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಷಾಪೀರ್, ಅಸ್ಗರ್ ಅಹಮದ್,ಹೆಚ್. ಆರ್. ನಾಗೇಶ್ ಮತ್ತಿರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend