ಬಿಜೆಪಿಯಲ್ಲಿ ಒಂದೇ ಟೀಂ ; ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್

ಮೈಸೂರು: ಬಿಜೆಪಿಯಲ್ಲಿ ಯ‍ಾವುದೇ ಟೀಂ ಇಲ್ಲ. ಬಾಂಬೆ ಟೀಂ, ಹಳೇ ಟೀಂ, ಹೊಸ ಟೀಂ ಎಂದು ಯಾವುದು ಇಲ್ಲ. ನಾವೆಲ್ಲರೂ ಒಂದೇ ಬಿಜೆಪಿ ಟೀಂ ಎಂದರು. ಒಂದಿಬ್ಬರು ಮಾತನಾಡಿದರೆ ಇಡೀ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದೆ ಎಂದಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ.ಸೋಮಶೇಖರ್ ಅವರು ಹೇಳಿದರು.ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಇದೆಲ್ಲ ಊಹಾಪೋಹ. ನಮಗೆಲ್ಲರಿಗೂ ಟಿಕೆಟ್ ನೀಡಿ ಸಚಿವ ಸ್ಥಾನವನ್ನು ನೀಡುವ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕೊಟ್ಟ ಮಾತುನಂತೆ ನಡೆದವರು. ಅವರು ಎಂದಿಗೂ ಮಾತು ತಪ್ಪಿದವರಲ್ಲ ಎಂದು ತಿಳಿಸಿದರು.

ರೋಷನ್ ಬೇಗ್ ಕಾಂಗ್ರೆಸ್ ಒಳರಾಜಕೀಯದಿಂದ ಹೊರಬಂದವರು ರೋಷನ್ ಬೇಗ್ ಅವರು ಬಿಜೆಪಿಯನ್ನು ನಂಬಿ ಬಂದವರಲ್ಲ. ಐಎಂಎ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಹೊರಗಡೆ ಬರುತ್ತಾರೆ. ಬೇಗ್ ಅವರು ಕಾಂಗ್ರೆಸ್ ಪಕ್ಷದ ಒಳರಾಜಕೀಯದಿಂದ ಬೇಸತ್ತು ಹೊರಬಂದಿದ್ದಾರೆಯೇ ವಿನಹ ಬಿಜೆಪಿಗೋಸ್ಕರ ಬಂದಿರಲಿಲ್ಲ ಎಂದರು. ಅವರಿಗೆ ಬಿಜೆಪಿ ಯಾವುದೇ ತರಹದ ಆಶ್ವಾಸನೆ ಕೊಟ್ಟಿರಲಿಲ್ಲ. ಅವರಿಗೆ ಬೇಕಿದ್ದರೆ ಶಿವಾಜಿನಗರದಲ್ಲಿ ಪಕ್ಷ ಟಿಕೆಟ್ ಕೊಡುತ್ತಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published.

Send this to a friend