ಹಿರಿಯೂರು : ಸಿಎಂ ಬಿಎಸ್ವೈ ಘೋಷಿಸಿದ್ದೇ ಒಂದು, ಮಾಡಿದ್ದೆ ಮತ್ತೊಂದು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಬಿಟ್ಟು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಮುಂದಾದ ಸಿಎಂ ಕ್ರಮಕ್ಕೆ ರಾಜ್ಯ ಕಾಡುಗೊಲ್ಲ ಯುವ ಸೇನೆಯ ರಾಜ್ಯ ಸಂಚಾಲಕ ವೈ. ಮಂಜುನಾಥ್ ಮ್ಯಾಕ್ಲೂರಹಳ್ಳಿ ಕಿಡಿಕಾರಿದ್ದಾರೆ.
ನಿನ್ನೆ ಕರ್ನಾಟಕ ಬಂದ್ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು “ಕಾಡುಗೊಲ್ಲರ ಅಭಿವೃವೃದ್ಧಿ ನಿಗಮ” ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದನ್ನು ನಂಬಿದ್ದ ಮುಗ್ಧ ಕಾಡುಗೊಲ್ಲರು ಸಿಎಂ ಗೆ ಹರ್ಷವನ್ನು ವ್ಯಕ್ತಪಡಿಸಿದ್ದರು. ಆದರೆ ಹಿರಿಯೂರು ಶಾಸಕರ ಅಣತಿಯಂತೆ ಘೋಷಣೆ ಮಾಡಿ 24 ಗಂಟೆಯೊಳಗೆ ಇಂದು ಈ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಅದರಲ್ಲಿ “ಗೊಲ್ಲ ಅಭಿವೃದ್ಧಿ ನಿಗಮ” ಸ್ಥಾಪನೆ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಿರುವುದಕ್ಕೆ ಕಾಡುಗೊಲ್ಲ ಯುವ ಸಂಘಟನೆಯ ರಾಜ್ಯ ಸಂಚಾಲಕ ತ್ರಿವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಿಎಂ ಯಡಿಯೂರಪ್ಪ ಅವರು ಘೋಷಿಸಿದ್ದೇ ಒಂದು, ಈಗ ಮಾಡುತ್ತಿರುವುದೇ ಮತ್ತೊಂದು ಇದು ಸರಿನಾ ಎಂದು ಸಿಎಂ ಗೆ ಪ್ರಶ್ನೆ ಮಾಡಿದ್ದಾರೆ. ಈ ಹೇಳಿಕೆ ನೋಡಿದರೆ ಕಾಡುಗೊಲ್ಲರನ್ನು ದಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದ್ದು, ನಿನ್ನೆ ಘೋಷಣೆಯಲ್ಲಿ ‘ಕಾಡುಗೊಲ್ಲ’ ಇವತ್ತು ‘ಗೊಲ್ಲ’, ಇದರಲ್ಲಿ ರಾಜಕೀಯ ಕೈವಾಡ ಎಂದು ಸಂಶಯ ವ್ಯಕ್ತಪಡಿಸಿದ್ದು, ಇತ್ತ ಕಾಡುಗೊಲ್ಲ ಸಮಾಜಕ್ಕೆ ಮಾಡಿದಾ ಮಹಾ ಮೊಸ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ಇವರ ಘೋಷಣೆ ಶಿರಾ ಉಪಚುನಾವಣೆಯಲ್ಲಿ ಕಾಡುಗೊಲ್ಲರ ಮತ ಸೆಳೆಯಲು ಘೋಷಿಸಿ ಇಂದು ಮೊಸ ಮಾಡಿದ್ದಾರೆ. ಉಪಚುನಾವಣೆಯಲ್ಲಿ ನಿಮಗೆ ಪ್ರತ್ಯುತ್ತರ ನೀಡುತ್ತವೆ. ಸಮಾಜವನ್ನು ರಾಜಕೀಯ ಪಕ್ಷಗಳು ಒಕ್ಕಲೆಬ್ಬಿಸುವುದನ್ನು ಕೈ ಬಿಡಬೇಕು ಎಂದು ವೈ. ಮಂಜುನಾಥ್ ಆಗ್ರಹಿಸಿದ್ದಾರೆ.