ಮರಕ್ಕೆ ಜೀಪ್ ಡಿಕ್ಕಿ ; ಕರ್ತವ್ಯ ನಿರತ ಇಬ್ಬರು ಪೋಲಿಸರ ಸಾವು.

ಮೈಸೂರು: ಪೊಲೀಸ್ ಜೀಪೋಂದು ನಿಯಂತ್ರಣ ತಪ್ಪಿದ್ದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕರ್ತವ್ಯ ನಿರತ ಇಬ್ಬರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ಈ ಘಟನೆ ಸಂಭವಿಸಿದೆ. ಎಎಸ್‌ಐ ಮೂರ್ತಿ(45) ಹಾಗೂ ಮುಖ್ಯಪೇದೆ ಶಾಂತಕುಮಾರ್(40) ಮೃತ ದುರ್ದೈವಿಗಳು.

ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಮಧ್ಯರಾತ್ರಿ ಸಾಲಿಗ್ರಾಮದಿಂದ‌ ಕೆ.ಆರ್.ನಗರದ ಕಡೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಸ್‌ಪಿ ರಿಷ್ಯಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.

Send this to a friend