ಮುನಿರತ್ನಗೆ ಬಿಗ್ ರಿಲೀಫ್: ತುಳಸಿ ಮುನಿರಾಜು ಅರ್ಜಿ ವಜಾ ಮಾಡಿದ ಸುಪ್ರೀಂ..!

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಚುನಾವಣೆ ಫಲಿತಾಂಶ ಸಂಬಂಧಿಸಿದಂತೆ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಲಾಗಿದೆ. ಇದರಿಂದ ರಾಜರಾಜೇಶ್ವರಿ ನಗರದ ಉಪಚುನಾವಣೆ ನಿಗದಿಯಂತೆ ನವೆಂಬರ್ 3ರಂದು ನಡೆಯಲಿದೆ.

2018ರ ಆರ್.ಆರ್.ನಗರದ ಚುನಾವಣೆಯಲ್ಲಿ ಮುನಿರತ್ನ ಚುನಾವಣಾ ಅಕ್ರಮ ಎಸಗಿ ಜಯ ಗಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ರಾಜ್ಯದ ಹೈಕೋರ್ಟ್ ಮೊದಲು ಇತ್ಯರ್ಥಪಡಿಸಲಿ. ಅಲ್ಲಿಯವರೆಗೆ ಉಪಚುನಾವಣೆ ನಡೆಸಬಾರದು ಎಂದು ಬಿಜೆಪಿಯ ತುಳಸಿ ಮುನಿರಾಜು ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಇಂದು ವಜಾ ಮಾಡಿದೆ.

Leave a Reply

Your email address will not be published.

Send this to a friend