ಸುರೇಶ್ ಅಂಗಡಿ ಸಾವು ಬಿಜೆಪಿಗೆ ಅರಗಿಸಲಾಗದ ನೋವು: ಎಂ.ಎಸ್. ರಾಘವೇಂದ್ರ.

ಹಿರಿಯೂರು: ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿಯವರು ಕೊರೊನಾ ಕರಾಳಕ್ಕೆ ಬಲಿಯಾಗಿದ್ದು ಅವರ ಅಕಾಲಿಕ ಮರಣ ಬಿಜೆಪಿ ಗೆ ಭರಿಸಲಾಗದ ನೋವುಂಟಾಗಿದೆ ” ಎಂದು ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ರಾಘವೇಂದ್ರ ತಿಳಿಸಿದರು. ಅವರು ನಗರದ ಶಾಸಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಸುರೇಶ್ ಅಂಗಡಿ ಶ್ರದ್ಧಾಂಜಲಿ ಸಭೆಯಲ್ಲಿ ” ಭಾಗವಹಿಸಿ ಮಾತನಾಡಿದರು.

ಸುರೇಶ್ ಅಂಗಡಿಯವರು ಬಿಜೆಪಿಯ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದ ಅವರು ಬಿಜೆಪಿ ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದ ಅವರು ಸ್ವಂತ ಸಾಮರ್ಥ್ಯದಿಂದಲೇ ನಾಲ್ಕು ಬಾರಿ ಸಂಸದರಾಗಿದ್ದರು ” ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಸಂಸದರು ಆಯ್ಕೆ ಆದ ಸಂದರ್ಭದಲ್ಲಿ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ನಿಭಾಯಿಸಲು ಅಮಿತಾ ಷಾ ರವರೇ ಇವರ ಹೆಸರನ್ನು ಸೂಚಿಸುವಷ್ಟು ಸಚ್ಚಾರಿತ್ರ ರಾಜಕಾರಣಿ ಆಗಿದ್ದರು, ಅವರ ಅಕಾಲಿಕ ಸಾವು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಭರಿಸಲಾಗದ ನಷ್ಟವಾಗಿದೆ” ಎಂದರು.

ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ ಮಾತನಾಡಿ, ” ಕಳೆದ ನಾಲ್ಕೈದು ದಿನಗಳ ಹಿಂದೆ ಪಕ್ಷದ ಕಟ್ಟಾಳು, ನೂತನ ರಾಜ್ಯ ಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ರವರನ್ನು ಕಳೆದುಕೊಂಡಿದ್ದ ಬಿಜೆಪಿಯು ಅದರ ನೋವನ್ನು ಮರೆಯುವ ಮುನ್ನವೇ ಕೇಂದ್ರ ಸಚಿವ ,ರಾಜ್ಯದ ಸಂಸದರಾದ ಸುರೇಶ್ ಅಂಗಡಿ ಯವರನ್ನು ಕಳೆದುಕೊಂಡದ್ದು ತುಂಬಾ ಅಪಾಯಕಾರಿ ವಿಷಯ ” ಎಂದರು. ದೇವರು ಕೂಡ ಒಮ್ಮೊಮ್ಮೆ ಕರುಣಹೀನ ಆಗುವನು ಎನ್ನುವುದಕ್ಕೆ ವಾರದಲ್ಲಿ ಇಬ್ಬರು ಸಂಸದರಾದ ಅಶೋಕ್ ಗಸ್ತಿ ಹಾಗೂ ಸುರೇಶ್ ಅಂಗಡಿ ಸಾವು ಸಾಕ್ಷಿಯಾಗಿದ್ದು, ಅವರುಗಳ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಮತ್ತು ಬಿಜೆಪಿ ಕಾರ್ಯಕರ್ತರು ದಿವಂಗತರ ಆದರ್ಶ ಗುಣಗಳನ್ನು ಅನುಸರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ” ಎಂದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ನಿರಂಜನ್ ಮೂರ್ತಿ, ಎಂ.ವಿ.ಹರ್ಷ, ಡಿ.ಗಂಗಾಧರ, ಹೆಚ್. ವೆಂಕಟೇಶ್, ಕಬಡ್ಡಿ ಶ್ರೀನಿವಾಸ್, ಶೋಭ, ಕೆ.ಪಿ.ಶ್ರೀನಿವಾಸ್, ಓಂಕಾರ್, ಲೋಕೇಶ್, ಶಿವರಾಜ್, ಬಸವರಾಜ್ ,ಎ ಕೃಷ್ಣ ಮೂರ್ತಿ, ನವೀನ್, ಮತ್ತಿರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend