ನಟಿ ಸಂಜನಾ ಗುಲ್ರಾನಿ ಗೂ ಜೈಲ್ ಪಿಕ್ಸ್ ..!

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಬೆನ್ನಲ್ಲೇ ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರನ್ನೂ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡ್ರಗ್ಸ್ ಕೇಸ್​ನಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೆ. 8 ರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದರು.

ನಟಿ ಸಂಜನಾ ಗುಲ್ರಾನಿ ಅಂದಿನಿಂದ ಸಿಸಿಬಿ ಕಸ್ಟಡಿಯಲ್ಲಿದ್ದರು. ಸಿಸಿಬಿ ಪೋಲಿಸರು ಸಂಜನಾರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಬುಧವಾರ ಸಂಜೆ 4ರ ಸುಮಾರಿನಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಇಂದು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಧೀಶರು ನಟಿ ಸಂಜನಾಗೆ 14 ದಿನ ಅಂದರೆ ಸೆ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಆದೇಶ ನೀಡಿದ್ದರು. ಕಳೆದ ಎರಡ್ಮೂರು ದಿನಗಳ ಹಿಂದೆ ಡ್ರಗ್ಸ್ ಕೇಸ್​ನಲ್ಲಿ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.ನಟಿ ರಾಗಿನಿ ಜೈಲು ಸೇರಿದ ನಂತರ ಸಂಜನನನ್ನು ಇಂದು ಪೋಲಿಸರು ಜೈಲಿಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆಯೇ ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

Leave a Reply

Your email address will not be published.

Send this to a friend