ಹಿರಿಯೂರು ಜೂಲೈ 14 : ಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಾಗ “ಕಾಡುಗೊಲ್ಲ” ಎಂದು ನಮೂದಿಸಿಕೊಳ್ಳುವಂತೆ ಕಾಡುಗೊಲ್ಲ ಸಂಘಟನೆಯ ಯುವ ಮುಖಂಡರು ಕ್ಷೇತ್ರಶಿಕ್ಷಣಾಧಿಕಾರಿ ನಾಗಭೂಷಣ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರವು 2018 ರಲ್ಲಿ ಗೊಲ್ಲ ಎಂಬ ಪದಕ್ಕೆ ಪರ್ಯಾಯವಾಗಿ ಕಾಡುಗೊಲ್ಲ,ಹಟ್ಟಿಗೊಲ್ಲ ಎಂಬ ಪದವನ್ನು ವರ್ಗ -1 ರಲ್ಲಿ ಜಾತಿ ಪಟ್ಟಿಗೆ ಬರುವಂತೆ ಅಂದಿನ ರಾಜ್ಯ ಸಚಿವ ಸಂಪುಟವು ನಿರ್ದೇಶನ ನೀಡಿದೆ. ಆಗಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಕಾಡುಗೊಲ್ಲ ಎಂದು ನಮೂದಿಸಿಕೊಳ್ಳುವಂತೆ ಆದೇಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ತಿಮ್ಮಯ್ಯ ಮನವಿ ಮಾಡಿದ್ದಾರೆ. ಮಾಯಸಂದ್ರ ರಂಗಪ್ಪ, ರಾಜಣ್ಣ, ಚಿಕ್ಕಣ್ಣ, ಶಿವಲಿಂಗಪ್ಪ, ರಂಗಣ್ಣ ಇತರರು ಇದ್ದರು.