ಸೆಪ್ಟೆಂಬರ್​ 21ರಿಂದ ಸ್ಕೂಲ್​ ಓಪನ್​, ಆದರೆ ತರಗತಿ ಪ್ರಾರಂಭ ಇಲ್ಲ – ಸಚಿವ ಎಸ್​ ಸುರೇಶ್ ಕುಮಾರ್.

ಬೆಂಗಳೂರು: ಸೆಪ್ಟೆಂಬರ್​ 21ರಿಂದ ಕೇವಲ ಶಾಲೆ ತೆರಯಲಿದೆ ಆದರೆ ಯಾವುದೇ ತರಗತಿ ಪ್ರಾರಂಭಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ. ಮೈಸೂರು ನಗರದಲ್ಲಿ “ಕೇಂದ್ರ ಗ್ರಂಥಾಲಯ ಉದ್ಘಾಟನೆ” ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.30ರೊಳಗೆ ದಾಖಲಾತಿ ಪ್ರಕ್ರಿಯೆ ಮುಗಿಬೇಕು. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಮುಗಿಬೇಕು ಎಂದು ತಿಳಿಸಿದರು. ಇನ್ನು ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಆಗೊಮ್ಮೆ ಸಮಸ್ಯೆ ಆದರೆ ಅಲ್ಲಿನ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮ ಕೈಗೊಳ್ತಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆ ಆದರೆ ಬಿಇಓ ಸಂಪರ್ಕಿಸಿ ಎಂದು ಸಚಿವರು ತಿಳಿಸಿದರು.

Leave a Reply

Your email address will not be published.

Send this to a friend