ತುಮಕೂರು : ಶಾಸಕ ಬಿ. ಸತ್ಯನಾರಾಯಣ ಅವರ ನಿಧನದ ನಂತರ ತೆರವಾದ ಶಿರಾ ವಿಧಾನಸಭಾ ಚುನಾವಣೆ ನಡೆಯುವ ಸ್ಥಾನಕ್ಕೆ ನಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಹಾಗೂ ರಾಜ್ಯ ಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ಡಿ.ಟಿ ಶ್ರೀನಿವಾಸ್ ಹೇಳಿದರು.
ಶಿರಾ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಕುಲದೈವ ಚಿತ್ರಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಟಿಕೆಟ್ ಘೋಷಣೆಗೂ ಮುನ್ನವೇ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದರು. ನಂತರ ಮಾತನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾನು ಕೂಡ ತಯಾರಿದ್ದು, ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದರು.
ಲೋಕಸಭಾ ಚುನಾವಣೆಯ ಮುನ್ನ ತುಮಕೂರಿನಲ್ಲಿ ನಮ್ಮ ಸಮಾಜದ ವತಿಯಿಂದ ಒಂದು ಸಮಾವೇಶ ಮಾಡಿದ್ದೆ, ಅದರಲ್ಲಿ ಸಿಎಂ ಬಿಎಸ್ವೈ, ಬಸವರಾಜ್ ಭಾಗವಹಿಸಿದ್ದರು. ಅಂದು ಜಿ.ಎಸ್ ಬಸವರಾಜ ಅವರಿಗೆ ನಮ್ಮ ಸಮಾಜ ಆಶಿರ್ವಾದ ಮಾಡಿ ಕೈಹಿಡಿದಿದೆ ಹಾಗಾಗಿ ಅವರು ಸಹ ಇವತ್ತು ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಗೆಲುವಿಗೆ ನಾನು ಕಾರಣೀಭೂತ ನಾಗಿದ್ದು ಅವರ ಗೆಲುವಿಗೆ ಶ್ರಮ ಪಟ್ಟಿದ್ದೇನೆ ಅವರ ಗೆಲುವಿನ ನಂತರ ನನಗೆ ಎಂಎಲ್ಸಿ ಆಗಲು ಅವಕಾಶ ಮಾಡಿ ಕೊಡಿ ಅಂತ ಕೇಳಿಕೊಂಡಿದ್ವಿ. ಆದರೆ ಶಿರಾ ಕ್ಷೇತ್ರದ ಕುಂಚಟಿಗ ಸಮಾಜದ ಚಿದಾನಂದ ಗೌಡ ಅವರಿಗೆ ಬಿಜೆಪಿಯಿಂದ ಎಂಎಲ್ ಸಿ ಟಿಕೆಟ್ ನೀಡಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವಂತ ನಿಟ್ಟಿನಲ್ಲಿ ಶಿರಾ ಉಪ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರೆ ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲೂ ಕೇಸರಿಯ ಗೆಲುವಿನ ಬಾವುಟ ಹಾರಿಸುತ್ತೆನೆ ಎಂದರು. ಅಹಿಂದ ವರ್ಗದ ಅಭ್ಯರ್ಥಿ ಬೇಕು ಎಂದು ಇಲ್ಲಿನ ಜನತೆಯ ಮಹದಾಸೆ ಆಗಿದೆ ಅವರ ಆಸೆ ಸಫಲಗೊಳ್ಳಬೇಕಾದರೆ ನನಗೆ ಟಿಕೆಟ್ ಘೋಷಣೆ ಯಾಗಬೇಕು. ನನಗೆ ಆತ್ಮವಿಶ್ವಾಸ ಇದೆ ಸಿಎಂ ಯಡಿಯೂರಪ್ಪನವರು ಅವಕಾಶ ಮಾಡಿಕೊಡುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದರು. ಅವಕಾಶ ಮಾಡಿಕೊಟ್ಟರೆ ಹಿರಿಯೂರು ಪಲಿತಾಂಶ ಶಿರಾದಲ್ಲಿ ಕೂಡ ಮರುಕಳಿಸುವಂತೆ ಮಾಡುತ್ತೇನೆ ಎಂದು ಹೇಳಿದರು. ನಮ್ಮ ಮಾವನವರಾದ ದಿವಂಗತ ಈ ಕೃಷ್ಣಪ್ಪನವರ ಮೇಲೆ ನಂಬಿಕೆ ಇಟ್ಟಿರುವ ಈ ಭಾಗದ ಜನರು ಅವರ ಒಡನಾಟ, ನನ್ನ ಪತ್ನಿ ಕ್ಷೇತ್ರದ ಒಡನಾಟ ಈ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಎಂದು ತಿಳಿಸಿದರು.