ಹಿರಿಯೂರು : ಶಿರಾ ಮತ್ತು ಆರ್.ಆರ್ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡರಲ್ಲೂ ಜಯಗಳಿಸಲಿದೆ ಎಂದು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಹೇಳಿದರು. ಇಂದು ತಾಲೂಕಿನ ಗುಯಿಲಾಳು ಗೊಲ್ಲರಹಟ್ಟಿಯ ವಕೀಲ ನಾಗರಾಜಯ್ಯ ಅವರ ಮನೆಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಶಿರಾ ವಿಧಾನಸಭಾ ಕ್ಷೇತ್ರ ಹಾಗೂ ಆರ್. ಆರ್ ನಗರ ಕ್ಷೇತ್ರದಲ್ಲಿ ಅನಿವಾರ್ಯವಾಗಿ ಉಪಚುನಾವಣೆ ಎದುರಾಗಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸಮಗ್ರವಾಗಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು. ಶಿರಾ ಕ್ಷೇತ್ರಕ್ಕೆ ಜಯಚಂದ್ರ ಹಾಗೂ ಆರ್.ಆರ್. ನಗರ ಕ್ಷೇತ್ರಕ್ಕೆ ಶ್ರೀಮತಿ ಕುಸುಮರವಿ ಅವರನ್ನು ಅಭ್ಯರ್ಥಿಗಳಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳಾಗಿ ಘೋಷಿಸಿದೆ.
ಎರಡು ಕ್ಷೇತ್ರಗಳ ಮತದಾರರಿಗೆ ಬಿಜೆಪಿ ಪಕ್ಷದ ಸರ್ಕಾರ ಬೇಸರ ತರಿಸಿದೆ. ಕೊರೊನಾ ನಿರ್ವಾಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಆರ್ಥಿಕ ಮುಗ್ಗಟ್ಟು ನಿಂದ ದೇಶವನ್ನು ಕೊನೆಗಾಣುವ ವ್ಯವಸ್ಥೆಯಲ್ಲಿ ಬಿಜೆಪಿ ವಿಫಲವಾಗಿದೆ ಆದ್ದರಿಂದ ಬಿಜೆಪಿ ಸರ್ಕಾರವನ್ನು ಕಿತ್ತೊಗಿಯುವ ದೃಷ್ಟಿಯಿಂದ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಖಚಿತ ಎಂದು ಮತದಾರರು ಹೇಳಿದ್ದಾರೆ. ಸಮಗ್ರವಾಗಿ ನಮ್ಮ ನಾಯಕರೆಲ್ಲರು ಒಟ್ಟಾಗಿ ಕೆಲಸ ಮಾಡಿಕೊಂಡು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಇನ್ನು ಡಿಕೆಶಿ ಮನೆ ದಾಳಿ ಕುರಿತು ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಗೆ ನಡುಕ ಉಂಟಾಗಿದೆ. ಕಾರಣ ಸಮಗ್ರ ಒಬ್ಬ ನಾಯಕ ಹಾಲಿ ಇರುವ ಒಂದು ಸರ್ಕಾರದ ಭ್ರಷ್ಟಾಚಾರ ಹಾಗೂ ಅನಾಚಾರದ ಬಗ್ಗೆ ಎತ್ತಿ ಹಿಡಿಯಲು ಹೊರಟಂತಹ ಸಂದರ್ಭದಲ್ಲಿ ಇಡಿ,ಸಿಬಿಐ ಉಪಯೋಗಿಸಿಕೊಂಡು ಅವರ ಮನೆ ಮೇಲೆ ದಾಳಿ ನಡೆಸಿರುವುದು ದುರದೃಷ್ಟಕರ ಎಂದರು. ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಪಟ್ಟ ಪೂರಕವಾಗಿ ಎಲ್ಲ ದಾಖಲೆಗಳನ್ನು ಸಮಗ್ರವಾಗಿ ಒದಗಿಸುವ ಶಕ್ತಿ ಡಿಕೆ ಶಿವಕುಮಾರ್ ಗೆ ಇದೆ. ಆಗಾಗಿ ಅವರು ಎದುರುವ ಅಗತ್ಯವಿಲ್ಲ. ಸಮಗ್ರವಾಗಿ ಹೊರಬಂದು ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನಾಗರಾಜಯ್ಯ ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್, ರಾಧಾಕೃಷ್ಣ, ಸಿಬಿ. ಪಾಪಣ್ಣ, ವಕೀಲ ಗುಯಿಲಾಳು ನಾಗರಾಜಯ್ಯ, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಎಸ್.ಆರ್. ತಿಪ್ಪೇಸ್ವಾಮಿ, ಖಾಲಿದ್ದ್ ಉಸೇನ್, ಎಸ್ ತಿಮ್ಮಯ್ಯ ಮ್ಯಾಕ್ಲೂರಹಳ್ಳಿ, ರಮೇಶ್ ಕೊಲ್ಕರ್, ನರಸಿಂಹ ಸ್ವಾಮಿ, ಮಾಜಿ ತಾ.ಸ. ಜಿ ಕೃಷ್ಣಮೂರ್ತಿ, ರಂಗಪ್ಪ ಯಾದವ್, ಚಿದಂಬರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.