ಶಿರಾ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅನುದಾನವನ್ನು ಮಂಜೂರು ಮಾಡಿಸಿಕೊಳ್ಳಲು ಟಿ.ಬಿ.ಜೆ ಮತ್ತು ಕೆ.ಎನ್.ಅರ್ ಜೋಡೆತ್ತುಗಳು ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್.ರಾಜೇಂದ್ರ ಹೇಳಿದರು. ಅವರು ನಗರದ ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಶಿರಾ ಮತ್ತು ಮಧುಗಿರಿ ಅಭಿವೃದ್ಧಿ ವಿಚಾರದಲ್ಲಿ ನಾಗಲೋಟದಲ್ಲಿದೆ ಮಧುಗಿರಿಗೆ ಎತ್ತಿನಹೊಳೆ ಮತ್ತು ಹೇಮಾವತಿ ನೀರು ಬಂದರೆ ಶಿರಾಕ್ಕೆ ಹೇಮಾವತಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯ ನೀರು ಲಭಿಸುತ್ತಿದೆ ಇದೇ ಟಿಬಿಜೆ ಅವರ ಕಾರ್ಯಶೈಲಿಯ ಗುಟ್ಟು ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾನು, ಕೆ.ಎನ್.ಅರ್ ರಾಮ ಲಕ್ಷ್ಮಣರಂತೆ ಇದ್ದೇವೆ ಅನುದಾನ ತರುವ ವಿಚಾರದಲ್ಲಿ ಇಬ್ಬರು ಕೂಡ ಪೈಪೋಟಿಯಿಂದ ಕೆಲಸ ಮಾಡುತ್ತಿದ್ದ ಕೆಲಸವನ್ನು ಸ್ಮರಿಸಿಕೊಂಡರು.ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜ್ ಮಾತನಾಡಿ ಜಯಚಂದ್ರ ಅವರು ಸೋತರು ಶಿರಾ ಕ್ಷೇತ್ರದ ಕೆಲಸ ಕಾರ್ಯಗಳಲ್ಲ ತೊಡಗಿಸಿಕೊಳ್ಳುತ್ತಿದ್ದ ರೀತಿ ನೀತಿಗೆ ಮಾರುಹೋಗಿ ಅವರ ಕೈ ಬಲಪಡಿಸಲು ಕಾಂಗ್ರೆಸ್ ಸೇರ್ಪಡೆ ಯಾಗುತ್ತಿರುವುದಾಗಿ ತಿಳಿಸಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಟಿ.ವಿನಯ್, ಗೋಣಿಹಳ್ಳಿ ದೇವರಾಜ್,ಗುಳಿಗೇನಹಳ್ಳಿ ನಾಗರಾಜ್, ಸಚಿನ್, ಹಲುಗುಂಡೇಗೌಡ, ಚಿದಾನಂದ್, ರಾಕೇಶ್ ಬಾಬು,ಎಂ.ಎನ್.ರಾಜು, ಲಕ್ಷ್ಮಿದೇವಮ್ಮ, ಮಾಗೋಡು ಶ್ರೀರಂಗಪ್ಪ, ಧರಣಿ,ವಾಜರಹಳ್ಳಿ ರಮೇಶ್, ಎಚ್.ಎಲ್.ರಂಗನಾಥ್, ಶಿವು ನಾಯಕ್, ದಯಾನಂದ್, ಅಜಯ್, ಹೇಮಂತ್, ಶಶಿ ಹುಲಿಕುಂಟೆ ಮಠ್ ಮತ್ತಿತರರು ಇದ್ದರು.