ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟವ್ರೆ, ಕಾಂಗ್ರೆಸ್ ಗೆ ವೋಟು ನೀಡಿ.
ಶಿರಾ : ಶಿರಾ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಮೂರು ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಶಿರಾ ಉಪಚುನಾವಣೆಯಲ್ಲಿ ಇಂದು ಮತದಾನ ನಡೆಯುತ್ತಿದ್ದು ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶಿವಕುಮಾರ್ ಎಂಬ ಕಾಂಗ್ರೆಸ್ ಮುಖಂಡ ಮರದಲ್ಲಿ ಅಕ್ಕಿ ಇಟ್ಕೊಂಡು ಮತ ಕೇಳುತ್ತಿರುವ ಪೋಟೋ ಇದೀಗ ವೈರಲ್ ಆಗ್ತಿದೆ. ಸಿದ್ದರಾಮಯ್ಯ ಅವರು ಉಚಿತವಾಗಿ ಜನರಿಗೆ ಅನ್ನಭಾಗ್ಯ ನೀಡಿದ್ದಾರೆ. ಆಗಾಗಿ ಕಾಂಗ್ರೆಸ್ ಪಕ್ಷದ ಟಿ.ಬಿ. ಜಯಚಂದ್ರ ಅವರಿಗೆ ಮತ ನೀಡಿ ಎಂದು ಶಿವಕುಮಾರ್ ಮತ ಕೇಳುತಿದ್ದಾರೆ.