ಶಿರಾ ಬೈ ಎಲೆಕ್ಷನ್ ಚುನಾವಣೆಗೆ ಡಾ.ಕೆ ನಾಗಣ್ಣ ಸಜ್ಜು..!

ಶಿರಾ : ಶಾಸಕ ಬಿ.ಸತ್ಯನಾರಾಯಣ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಭಾರಿ ಸ್ಪರ್ಧಿಸಿಸಲು ಬಿಜೆಪಿ,ಜೆಡಿಎಸ್,ಕಾಂಗ್ರೇಸ್, ಸೇರಿದಂತೆ ಇತರೇ ಪಕ್ಷಗಳಿಂದ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿರುವುದನ್ನು ಕಾಣಲಾಗುತ್ತಿದೆ. ಆದರೆ ಶಿರಾ ಕ್ಷೇತ್ರದಲ್ಲಿ ಜನರೊಂದಿಗೆ ಇದ್ದು ಕ್ಷೇತ್ರದ ಜನತೆಗೆ ಬೇಕಾಗಿರುವ ಮೂಲ ಭೂತ ಸೌಲಭ್ಯಗಳು ಹಾಗೂ ಸರಕಾರಿ ಸೌಲಭ್ಯಗಳನ್ನು ಒದಗಿಸುವಂತಹ ಸಕ್ರೀಯ ರಾಜಕಾರಣಿಗಾಗಿ ಶಿರಾ ಜನತೆ ಹುಡುಕಾಟದಲ್ಲಿರುವುದನ್ನು ಕಾಣ ಬಹುದಾಗಿದೆ.

ಶಿರಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪಶುಪಾಲಕರು, ಕುರಿಗಾಯಿಗಳು ಹೈನುಗಾರಿಕೆಯನ್ನು ಮಾಡಿಕೊಂಡು ಬದುಕುತ್ತಿದ್ದಾರೆ.ಇಂತಹವರಿಗೆ ಹಲವಾರು ರೀತಿಯಲ್ಲಿ ಸರಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಾಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ ನಾಗಣ್ಣರವರ ಹೆಸರನ್ನು ಶಿರಾ ತಾಲೂಕಿನ ಜನತೆ ಹಾಗೂ ಹೈನುಗಾರರು, ಕುರಿಗಾಯಿಗಳು ಹಾಗೂ ಮತದಾರರು ಶಿರಾ ವಿಧಾನ ಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದು ಇದೀಗ ಶಿರಾ ಬೈ ಎಲೆಕ್ಷನ್ ನಲ್ಲಿ ಅಚ್ಚರಿ ಹೆಸರು ಕೇಳಿ ಬರುತ್ತಿದೆ.

ಯಾರು ಈ ನಾಗಣ್ಣ ?. : ಡಾ.ಕೆ ನಾಗಣ್ಣ ಮೂಲತಃ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗನಹಳ್ಳಿ ಗ್ರಾಮದ ರೈತ ಕುಟುಂಬದವರು,ಇವರು ಪಶು ವೈದ್ಯಕೀಯ ಇಲಾಖೆಯಲ್ಲಿ ಪಶು ವೈದ್ಯರಾಗಿ ವೃತ್ತಿ ಆರಂಭಿಸಿದವರು,ಇವರು ಕ್ರೀಯಾಶೀಲ ಅಧಿಕಾರಿಯಾಗಿದ್ದು,ಇವರು ಜಲಾನಯನ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ಶಿರಾ ಕ್ಷೇತ್ರದ ಜನತೆಗೆ ತುಂಬಾ ಹತ್ತಿರ : ಈ ಹಿಂದೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಸಚಿವರಾಗಿದ್ದಾಗ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಆ ದಿನಗಳಲ್ಲಿ ಶಿರಾ ಜನತೆಗೆ ಕುರಿಸಾಕಾಣಿಕೆ ಮಾಡಲು ಸಾಲ ಸೌಲಭ್ಯ,ಕೃಷಿಕರಿಗೆ ನೀರಾವರಿ ಸೌಲಭ್ಯ,ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರಿನಲ್ಲಿ ಹೆಸರುಗಳಿಕೆ : ಇವರು ಈ ಹಿಂದೆ ಬಿ. ಸುರೇಶ್‌ಗೌಡ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ೩ ವರ್ಷಗಳ ಕಾಲು ತುಮಕೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅಲ್ಲದೇ ತುಮಕೂರು ಗ್ರಾಮಾಂತರದಲ್ಲಿ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿತರಿಸುವಲ್ಲಿ ಹಾಗೂ ಅರಿವು ಮೂಡಿಸುವಲ್ಲಿ ಹೆಚ್ಚಿನದಾಗಿ ನರೇಗಾದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು,ಇವರ ಕಾರ್ಯವನ್ನು ಕಂಡ ಅಂದಿನ ಶಾಸಕ ಬಿ.ಸುರೇಶ್‌ಗೌಡರು ಡಾ.ಕೆ ನಾಗಣ್ಣರವರ ಕಾರ್ಯದ ಬಗ್ಗೆ ಒಳ್ಳೆ ಅಭಿಪ್ರಾಯದ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದರು.
ಶಿಸ್ತು ಬದ್ಧ ವ್ಯಕ್ತಿಯ ಹಿಂದೆ ಬಿದ್ದಿದ್ದಾರೆ ಶಿರಾ ಮತದಾರರು: ಇವರು ಎಲ್ಲೇ ಹೋದರು ಸರಕಾರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಸರಕಾರದ ಆಶಯಗಳನ್ನು ಮನಗಂಡು ಕೆಲಸ ಮಾಡುತ್ತಿರುವುದನ್ನು ಕಂಡು ಶಿರಾ ಕ್ಷೇತ್ರದ ಕಡೆ ಮುಖ ಮಾಡುವಂತೆ ಒತ್ತಾಯ ಮಾಡುತ್ತಿರುವುದು ಹೆಚ್ಚಿದೆ.

ನಿರಂತರ ಸಂಪರ್ಕದಲ್ಲಿದ್ದಾರೆ : ಇವರು ಸರಕಾರಿ ಇಲಾಖೆಯಲ್ಲಿ ಸೇವೆ ಸೇರಿ ೨೩ ವರ್ಷ ಕಳೆದಿದೆ.ಅಂದಿನಿಂದ ಇವರು ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಇವರು ಸದ್ಯಕ್ಕೆ ತುಮಕೂರಿನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರ ಕಚೇರಿಗೆ ಪ್ರತಿದಿನ ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಕುರಿಗಾಯಿಗಳು,ಹೈನುಗಾರರು,ಯುವಕರು ಬಂದು ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಕೇಳಿ ಸೌಲಭ್ಯ ಪಡೆಯುತ್ತಾರೆ.

ಮೌನ : ಕುಂಚಿಟಿಗ ಸಮುದಾಯಕ್ಕೆ ಸೇರಿದ ಡಾ.ಕೆ ನಾಗಣ್ಣನವರನ್ನು ಶಿರಾ ಚುನಾವಣೆಗೆ ಸ್ಪರ್ಧೆ ಮಾಡಲು ಬರುವಂತೆ ಕ್ಷೇತ್ರದ ಒತ್ತಾಯ ಮಾಡುತ್ತಿದ್ದರು ಪ್ರಜಾನಾಡು . ಕಾಂ ನೊಂದಿಗೆ ಮಾತಾಡಿದ ಡಾ. ನಾಗಣ್ಣ ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮತದಾರರು, ನನ್ನ ಬಂಧುಗಳು ಒತ್ತಾಯ ಮಾಡಿದ್ದಾರೆ. ಇದುವರೆಗೂ ನನ್ನನ್ನು ಯಾವ ಪಕ್ಷದವರು ಭೇಟಿ ಮಾಡಿಲ್ಲ, ನಾನು ಸ್ಪರ್ಧಿಸುವಂತೆ ಮತದಾರರು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಯ ಸಿಗುವದೇ ?. : ಡಾ.ಕೆ ನಾಗಣ್ಣನವರನ್ನು ಯಾವುದಾದರೂ ಒಂದು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ. ನಾಗಣ್ಣರವರು ಸರಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಚುನಾವಣೆಯ ಅಕಾಡಕ್ಕೆ ದುಮುಕಿದರೆ ಗೆಲುವು ಸಿಗಬಹುದೇ ಎಂಬ ಮಾತುಗಳು ಹೊರ ಬರುತ್ತಿವೆ. ಇತ್ತೀಚೆಗೆ ಶಿರಾ ಭಾಗದ ಭುವನಹಳ್ಳಿಯಲ್ಲಿ ೪೪ ಕೋಟಿ ರೂಗಳಲ್ಲಿ ನಿರ್ಮಾಣವಾಗುತ್ತಿರು ಆಧುನಿಕ ಕುರಿ ವದಗಾರದ ನಿರ್ಮಾಣಕ್ಕೆ ಹಾಕಿದ ಶ್ರಮ ಫಲ ತಂದು ಕೊಡುವುದೇ ಕಾದು ನೋಡಬೇಕಿದೆ.

Leave a Reply

Your email address will not be published.

Send this to a friend