ನೇತ್ರಪೋಷಕ ಡಿ ವಿಟಮಿನ್​ಗೆ ಸೂರ್ಯಪಾನ

ಸೂರ್ಯಪಾನವನ್ನು ಆರಂಭಿಸಿದಂತೆ ನಿಮ್ಮ ದೇಹದಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಒಂದು ತಿಂಗಳಾಗುತ್ತಿದ್ದಂತೆಯೇ ನಿಮ್ಮಲ್ಲಿ ಲವಲವಿಕೆ ಕಂಡುಬರುತ್ತದೆ. ಮೂರು ತಿಂಗಳ ಮೊದಲ ಹಂತ ಮುಟ್ಟುತ್ತಿದ್ದಂತೆ, ನಿಮ್ಮ ಸಣ್ಣಪುಟ್ಟ ಕಾಯಿಲೆಗಳು ಮಾಯವಾಗುತ್ತವೆ. ಆಹಾರದಲ್ಲಿ ಕಡಿತ ಮಾಡಬೇಕು ಎನಿಸುತ್ತದೆ. ದೇಹದಲ್ಲಿ ಆಲಸ್ಯ ಮಾಯವಾಗಿಬಿಡುತ್ತದೆ. ಆರು ತಿಂಗಳ ಎರಡನೆಯ ಹಂತ ದಾಟುತ್ತಿದ್ದಂತೆ ದೇಹದ ಹಿರಿಯ ಕಾಯಿಲೆಗಳು ಓಡಿಹೋಗಲು ಆರಂಭಿಸುತ್ತವೆ.ನಿಮಗೆ ಆಹಾರದ ವಿಷಯದಲ್ಲಿ ಅನಾಸಕ್ತಿ ಮೂಡುತ್ತದೆ. ಹಾಗಾಗಿ ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣ ಕಡಿಮೆಯಾಗುತ್ತದೆ. ಒಂಬತ್ತು ತಿಂಗಳ ಮೂರನೆಯ ಹಂತ ತಲುಪುತ್ತಿದ್ದಂತೆ ನಿಮಗೆ ಆಹಾರದ ಅಗತ್ಯ ಕಂಡುಬರುವುದಿಲ್ಲ. ನಿಮ್ಮ ಕಾಯಿಲೆಗಳು ದೂರ ಓಡಿಹೋಗುತ್ತವೆ. ನಿಮ್ಮ ದೇಹ ಹಗುರವಾಗಿದ್ದು ನೀವು ಆರೋಗ್ಯದ ಅತ್ಯುಚ್ಚ ಮಟ್ಟವನ್ನು ಮುಟ್ಟುತ್ತೀರಿ. ಇದು ನಿಮ್ಮ ಆಧ್ಯಾತ್ಮಿಕ ಸಾಧನೆಯ ಹಂತವೂ ಆಗಬಹುದು. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಹಂತದ ಉನ್ನತ ಹಂತವನ್ನೂ ಮೂರನೆಯ ಹಂತದ ಕಡೆಯಲ್ಲಿ ನೀವು ಮುಟ್ಟಬಲ್ಲಿರಿ. ಸೂರ್ಯಪಾನದ ವೇಳೆ ನಮ್ಮ ದೇಹಕ್ಕೆ ವಿಟಮಿನ್ ‘ಎ’ ಹಾಗೂ ‘ಡಿ’ ಇವೆರಡೂ ನೇರವಾಗಿ ದೊರೆಯುತ್ತವೆ. ಆದರೂ ಇವಿಷ್ಟೂ ಆಶಾವಾದದ ಮಾತುಗಳಾಗುತ್ತವೆ.

ಸೂರ್ಯನ ದರ್ಶನಕ್ಕೆ ಮೋಡ ಅಡ್ಡಿ ಬರಬಹುದು, ಮಳೆ ಬರಬಹುದು. ಅಂತಹ ಸಂದರ್ಭಗಳಲ್ಲಿ ಎಂದಿನಂತೆ ಸೂರ್ಯಪಾನ ಮಾಡಲು ಆಗದಿರಬಹುದು. ಚಿಂತೆಯಿಲ್ಲ. ಮೋಡದ ಹಿಂದೆ ಇರುವ ಸೂರ್ಯನ ಮಾರ್ಗವನ್ನು ಅಭ್ಯಾಸಬಲದಿಂದ ಈಗ ನೀವು ಗುರುತಿಸಬಲ್ಲಿರಿ. ಹಾಗಾಗಿ ಮೋಡ ಇರುವ ದಿನ ಎಂದಿನಂತೆ ಸೂರ್ಯಪಾನ ಮಾಡಿ. ಆದರೆ ಸೂರ್ಯಪಾನದಲ್ಲಿ ಹೆಚ್ಚಿಸಬೇಕಾದ ಹತ್ತು ಸೆಕೆಂಡ್ ಕಾಲವನ್ನು ಅಂದು ಹೆಚ್ಚಿಸಬೇಡಿ.

ಕಣ್ಣಿನ ವೈದ್ಯರಿಂದ ಪರೀಕ್ಷೆ : ಈ ತೆರನಾದ ಸೂರ್ಯಪಾನ ದಿಂದ ಕಣ್ಣಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇನ್ನು ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ. ಏನೇ ಆಗಲಿ, ಸೂರ್ಯಪಾನವನ್ನು ಆರಂಭಿಸುವ ಮೊದಲು ಕಣ್ಣಿನ ವೈದ್ಯರಿಗೆ ನಿಮ್ಮ ಕಣ್ಣಿನ ಸ್ಥಿತಿಯನ್ನು ತೋರಿಸಿ ಹಾಗೂ ಸೂರ್ಯಪಾನ ಆರಂಭಿಸಿದ ನಂತರ ಮೂರು ತಿಂಗಳಿಗೊಮ್ಮೆ ನಿಮ್ಮ ಕಣ್ಣಿನ ಸಾಮರ್ಥ್ಯ ಪರೀಕ್ಷಿಸಿ ಪ್ರಗತಿಯನ್ನು ದಾಖಲಿಸಿಕೊಳ್ಳಿ. ಇದರಿಂದ ನಿಮ್ಮ ಕಣ್ಣಿನಲ್ಲಾದ ಉತ್ತಮ ಬದಲಾವಣೆ ನಿಮಗೇ ಗೊತ್ತಾಗುತ್ತದೆ.
ಸಮಯದ ಗಣನೆ: ಸಾಧಾರಣವಾಗಿ ಪ್ರತಿದಿನ ಸೆಕೆಂಡುಗಳಲ್ಲಿ ಸೂರ್ಯಪಾನ ಮಾಡುವ ಸಮಯ ಹೆಚ್ಚಿಸುತ್ತ ಹೋಗುವಾಗ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಕಷ್ಟ ಎನಿಸಬಹುದು. ಅದಕ್ಕೆ ಸುಲಭ ತಂತ್ರವೆಂದರೆ, ನಿಮ್ಮ ಇಷ್ಟದೇವತಾ ಪ್ರಾರ್ಥನೆಯ ಮಂತ್ರವನ್ನು ಜಪಿಸುವುದು. ಗಾಯತ್ರೀಮಂತ್ರ, ಮೃತ್ಯುಂಜಯಮಂತ್ರಗಳನ್ನು ಜಪಿಸುತ್ತ ಇಂತಹ ಸಮಯವನ್ನು ಕಳೆಯುವುದು ಹಿತವಾಗಿರುತ್ತದೆ. ಇದರಿಂದ ಸಮಯವೆಷ್ಟಾಯಿತು ಎಂಬುದರ ಲೆಕ್ಕ ಸಿಗುವುದರೊಳಗೆ ಆಧ್ಯಾತ್ಮಿಕ ಸಾಧನೆಗೂ ದಾರಿಯಾಗುತ್ತದೆ. ಇದರಿಂದ ದೈಹಿಕ ಆರೋಗ್ಯವನ್ನು ಪಡೆಯುವುದಲ್ಲದೆ ಮನುಷ್ಯನ ಆಹಾರದ ಮೇಲಿನ ಅವಲಂಬನೆ ತಪ್ಪುತ್ತದೆ. ಸೂರ್ಯಪಾನದ ಸಿದ್ಧಿ ಪಡೆಯುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯವನ್ನು, ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದು.

ನೀವೂ ಪ್ರಶ್ನೆ ಕೇಳಿ: ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

Leave a Reply

Your email address will not be published.

Send this to a friend