ಕೃಷ್ಣ ಮಠದ ಫಲಕದಲ್ಲಿ ಕನ್ನಡ ನಾಪತ್ತೆ – ಸಂಸ್ಕೃತ, ತುಳು ಪ್ರತ್ಯಕ್ಷ

ಉಡುಪಿ: ರಾಜ್ಯದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾದ ಉಡುಪಿ ಕೃಷ್ಣಮಠದಲ್ಲಿ ಕನ್ನಡ ನಾಪತ್ತೆಯಾಗಿದೆ. ಉಡುಪಿ ಶ್ರೀಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಬದಲಿಗೆ ಸಂಸ್ಕೃತ, ತುಳು ಭಾಷೆಯ ಪದಗಳು ಕಂಡುಬರುತ್ತದೆ.

ಈ ಹಿಂದೆ ಕೃಷ್ಣಮಠದ ಮುಖ್ಯ ಮಹಾದ್ವಾರದಲ್ಲಿ ಕನ್ನಡದಲ್ಲಿ ಕೃಷ್ಣಮಠ ಎಂಬ ದೊಡ್ಡ ಫಲಕವನ್ನು ಹಾಕಲಾಗಿತ್ತು. ಈಗ ಉಡುಪಿಯಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಮಠವನ್ನು ನವೀಕರಣ ಮಾಡುವ ಜೊತೆಗೆ ಕನ್ನಡದ ಬೋರ್ಡು ತೆಗೆದು ಹೊಸ ಬೋರ್ಡ್ ಅಳವಡಿಸಿದ್ದಾರೆ.

ಹೊಸ ಫಲಕದಲ್ಲಿ ಕನ್ನಡ ಕಾಣೆಯಾಗಿದೆ. ತುಳು ಮತ್ತು ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ಎಂದು ಬರೆಯಲಾಗಿದೆ. ಶ್ರೀಕೃಷ್ಣಮಠ ರಜತಪೀಠ ಪುರ ಎಂದು ತುಳುವಿನಲ್ಲೂ, ಶ್ರೀಕೃಷ್ಣಮಠ ರಜತಪೀಠ ಪುರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿದೆ.

ಈ ಬಗ್ಗೆ ಕನ್ನಡ ಅಭಿಮಾನಿಗಳು ಮಠದ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾದ ಕೃಷ್ಣಮಠದಲ್ಲಿ ಕನ್ನಡಕ್ಕೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Send this to a friend