ಹಿರಿಯೂರು : ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಸಿ. ವೀರಣ್ಣ(ಟ್ರಜರಿ) ನಿವೃತ್ತ ಖಜಾನಾಧಿಕಾರಿ ಇವರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪುತ್ರ ಕೆ.ವಿ. ಮಂಜುನಾಥ್ ತಿಳಿಸಿದ್ದಾರೆ. ದಿವಂಗತ ಸಿ. ವೀರಣ್ಣ ನವರು 8/11 / 2020 ರಂದು ದೈವಾಧೀನರಾಗಿದ್ದು ಇದರ ಪ್ರಯುಕ್ತ
ಹಿರಿಯೂರಿನ ದೇವಗಿರಿ ನಗರದಲ್ಲಿ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀಯುತರು ಖಜಾನೆ ಇಲಾಖೆಯಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿ, ಪಾತ್ರಾಂಕಿತ ಖಜಾನಾಧಿಕಾರಿಯಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವುದರ ಮೂಲಕ ಹಾಗೂ ವೃತ್ತಿ ಬದುಕಿಗೆ ಸೀಮಿತವಾಗದೆ ಸಮಾಜ ಮತ್ತು ಸಮುದಾಯಕ್ಕೆ ಏಳಿಗೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಶ್ರೀಯುತರ ಸರಳತೆ, ಸಜ್ಜನಿಕೆ, ನಿಷ್ಕಲ್ಮಶವಾದ ಮನಸ್ಸು, ಜನಪರ ಹಾಗೂ ಜೀವಪರ ಚಿಂತನೆ, ಸಾಮಾಜಿಕ ಕಳಕಳಿ, ಸಮಯೋಚಿತ ಹೊಂದಾಣಿಕೆಯ ಮನೋಭಾವ ಹಾಗೂ ಸ್ಮರಣೀಯ ಆದರ್ಶದ ಬದುಕನ್ನು ಬದುಕಿನ ಜಾಯಮಾನದಲ್ಲಿ ಉಳಿದುಕೊಂಡಿದ್ದಾರೆ. ಇಂದಿನ ಯುವ ಪೀಳಿಗೆಗೆ
ಸಂಘಟನಾತ್ಮಕವಾಗಿ ಅವರು ತೋರಿಸಿಕೊಟ್ಟ ಹೆಜ್ಜೆಗಳು ಈಗಿನ ಯುವಪೀಳಿಗೆಗೆ ಮಾರ್ಗದರ್ಶನವಾಗಿದೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಂಗಭೂಮಿ ಕಲಾವಿದರಾಗಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರಿಂದ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ದೊರೆತಿವೆ.