ಮಂಗಳೂರು : ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ್(40) ಎಂಬವರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಸ್ತಿ ಪಡ್ಪುವಿನ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಮಂಗಳವಾರ ತಡ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಚಾಕು ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಬುಧವಾರ ಸುರೇಂದ್ರ ಅವರ ಶವ ಪತ್ತೆಯಾಗಿದೆ. ಮನೆಯ ಬಾಗಿಲು ತೆರೆಯದ ಹಿನ್ನೆಲೆ ಅನುಮಾನ ಹಿನ್ನೆಲೆ ಸ್ಥಳೀಯರು ಪರಿಶೀಲಿನೆ ನಡೆಸಿದಾಗ ಸತ್ತ ಸ್ಥಿತಿಯಲ್ಲಿ ಸುರೇಂದ್ರ ಬಂಟ್ವಾಳ್ ಪತ್ತೆಯಾಗಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.