ಚಿತ್ರದುರ್ಗ : 2020 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಗೊಂಡಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆ ಗ್ರಾಮದ ಸಂಗೀತ ಪ್ರಾಂಶುಪಾಲ 69 ವರ್ಷದ ಆರ್. ತಿಪ್ಪೇಸ್ವಾಮಿ ನವರಿಗೆ ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನವೆಂಬರ್ 07 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇವರು 26 ವರ್ಷಗಳಿಂದ ಸಂಗೀತ ಶಿಕ್ಷಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿಕೊಂಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಸಂಗೀತ, ಸುಗಮ ಸಂಗೀತ, ಹಾಗೂ ವಚನಗಾಯನ ಕಾರ್ಯಕ್ರಮಗಳನ್ನು ರಾಜ್ಯಮಟ್ಟದ ಹಂಪಿ ಉತ್ಸವ, ದುರ್ಗೋತ್ಸವ, 75ನೇ ವಿಶ್ವ ಕನ್ನಡ ಸಮ್ಮೇಳನ, ಮುಂತಾದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವುದು. ವಿವಿಧ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಮಟ್ಟದ ಉಪನ್ಯಾಸ ಕಾರ್ಯಕ್ರಮ, ಗಡಿನಾಡ ಜಾಗೃತಿ ಸಮಾವೇಶ, ಸಂಗೀತೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇವರು ಆಯೋಜಿಸಿರುವುದು ಎಂದು ತಿಳಿದು ಬಂದಿದೆ.
ಇವರು ಕನ್ನಡ, ತೆಲುಗು, ತಮಿಳು, ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ ಎನ್ನಬಹುದು.
ಇವರು ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದಲ್ಲಿ ಸಂಗೀತ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ತಂದೆ ರಾಜಣ್ಣ ಪ್ರಸಿದ್ಧ ಸಂಗೀತ ಹಾಗೂ ರಂಗ ಕಲಾವಿದರು, ತಾಯಿ ನಿಂಗಮ್ಮ ಜಾನಪದ ಕಲಾವಿದೆ.
ಮಾಜಿ ಕರ್ನಾಟಕ ಸಂಗೀತ ಅಕಾಡೆಮಿ ಸದಸ್ಯರಾದ ಹೆಚ್.ಎನ್. ನಾರಾಯಣಪ್ಪ ಇವರು ಸಂಗೀತ ಗುರುಗಳಾಗಿದ್ದಾರೆ.