ಭಾರಿ ಗಾತ್ರದ ಮೀನು ಸೆರೆ ; ಎರಡು ಕೊಂಬಿನ ತೊರಕೆ ಮೀನು ನೋಡಲು ಮುಗಿಬಿದ್ದ ಜನರು.

ಉಡುಪಿ : ಮಲ್ಪೆ ಮೀನುಗಾರರು ಬೀಸಿದ್ದ ಬಲೆಗೆ ಭಾರೀ ಗಾತ್ರದ ಎರಡು ಕೊಂಬಿನ ತೊರಕೆ ಮೀನು ಬಿದ್ದಿದ್ದೆ. ಇದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಈ ಮೀನು ಸುಮಾರು 900 ಮೀ ಉದ್ದ, 250 ಕೆ.ಜಿ. ತೂಕವಿದೆ ಎನ್ನಲಾಗಿದೆ. ಮಲ್ಪೆ ಸುಭಾಶ್​ ಸಾಲಿಯಾನ್ ಅವರು ತಮ್ಮ ನಾಗಸಿದ್ಧಿ ಬೋಟಿನಲ್ಲಿ ಮೀನು ಹಿಡಿಯಲು ತೆರಳಿದ್ದರು.

ಇವರು ಸಮುದ್ರದಲ್ಲಿ ಬೀಸಿದ್ದ ಬಲೆಗೆ ಈ ದೊಡ್ಡ ಗಾತ್ರದ ಮೀನು ಬೆಲೆಗೆ ಬಿದ್ದಿದೆ. ತೂಕವಿದ್ದ ಮೀನನ್ನು ಕ್ರೇನ್​ ಮೂಲಕ ಬೋಟ್​ನಿಂದ ಕೆಳಗಿಳಿಸಲಾಗಿದೆ.

ಇಷ್ಟು ದೊಡ್ಡ ಗಾತ್ರದಲ್ಲಿ ತೊರಕೆ ಮೀನು ಇದೇ ಮೊದಲ ಬಾರಿಗೆ ಬಲೆಗೆ ಬಿದ್ದಿದ್ದು, ಮೀನನ್ನು ನೋಡಲು ಸಾಕಷ್ಟುಜನ ಮಲ್ಪೆ ಬಂದರಿಗೆ  ಬಂದಿದ್ದಾರೆ. ಸದ್ಯ ತೊರಕೆ ಮೀನನ್ನು ಕ್ರೇನ್​ ಮೂಲಕ ಮೇಲೆತ್ತುವ ವೀಡಿಯೋ ಮತ್ತು ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

Leave a Reply

Your email address will not be published. Required fields are marked *

Send this to a friend