ಯುಎಸ್ ಓಪನ್‌ನಲ್ಲಿ ಜೋಕೊವಿಕ್‌ಗೆ ಸುಲಭ ಸವಾಲು, ಸೆರೇನಾ ಹಾದಿ ದುರ್ಗಮ

ನ್ಯೂಯಾರ್ಕ್: ಸೋಮವಾರದಿಂದ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಸಿಂಗಲ್ಸ್ ಡ್ರಾ ಪ್ರಕಟಗೊಂಡಿದೆ. ದಿಗ್ಗಜ ರೋಜರ್ ೆಡರರ್ ಮತ್ತು ಹಾಲಿ ಚಾಂಪಿಯನ್ ರಾೆಲ್ ನಡಾಲ್ ಗೈರಿನಲ್ಲಿ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಸುಲಭ ಸವಾಲು ಪಡೆದಿದ್ದು, 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಮತ್ತೊಂದೆಡೆ ಮಹಿಳಾ ಸಿಂಗಲ್ಸ್‌ನಲ್ಲಿ ದಾಖಲೆಯ 24ನೇ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಆತಿಥೇಯ ತಾರೆ ಸೆರೇನಾ ವಿಲಿಯಮ್ಸ್ ಕಠಿಣ ಹಾದಿಯಲ್ಲಿ ಸಾಗಬೇಕಾಗಿದೆ.

ಕರೊನಾ ಗೆದ್ದು ಬಂದಿರುವ ಜೋಕೊವಿಕ್ ಮೊದಲ ಸುತ್ತಿನಲ್ಲಿ ಬೋಸ್ನಿಯಾದ ಡಮಿರ್ ಜುಮ್‌ಹರ್ ವಿರುದ್ಧ ಸೆಣಸಲಿದ್ದಾರೆ. ಟೂರ್ನಿಯಲ್ಲಿ ಜೋಕೋ ನಂತರದ ಉನ್ನತ ಶ್ರೇಯಾಂಕಿತರಾಗಿರುವ ಆಸ್ಟ್ರಿಯಾದ ಡೊಮಿಕ್ ಥೀಮ್, ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಂತೆ ಇಲ್ಲೂ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Send this to a friend