ಸ್ತ್ರೀಯರಿಂದ ಭಾರತ ಉಳಿದಿದೆ : ವಿನಯ್ ಗುರೂಜಿ

ಹಿರಿಯೂರು, ಜೂನ್ 24 : ಭಾವನೆಯಿಂದ ಬದುಕಿರುವುದೇ ಭಾರತ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು. ತಾಲೂಕು ಹೊಸಯಳನಾಡು ಪಬ್ಲಿಕ್ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ನಂತರ ಆರ್ಶಿವಚನ ನೀಡಿದರು. ಭಾರತ ಉಳಿಯಬೇಕಾದರೆ ಸ್ತ್ರಿಯರ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಮಹಿಳೆಯಿರಿಂದ ತುಂಬಾ ಜವಾಬ್ದಾರಿಯುತ ಬದಲಾವಣೆ ಕಾಣಬಹುದಾಗಿದೆ. ಮಾನವನ ಜೀವನದಲ್ಲಿ ಸಂಸ್ಕಾರ ಮುಖ್ಯವಾಗಿದೆ. ಜ್ಞಾನ ಮತ್ತು ಸಂಸ್ಕಾರ ಎರಡು ಅಂಶಗಳು ಕಲಿಯಬೇಕು ಎಂದು ತಿಳಿಸಿದರು.
ಈ ಶಾಲೆಗೆ ಭೇಟಿ ನೀಡಿದ್ದು ಒಬ್ಬ ವ್ಯಕ್ತಿಯಿಂದ ಏನು ಮಾಡಲು ಸಾಧ್ಯವಿಲ್ಲ, ಎಂಬುದು ಇಲ್ಲಿಂದ ತುಂಬಾ ಕಲಿತುಕೊಂಡಿದ್ದೇನೆ. ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ, ಎಲ್ಲ ವ್ಯವಸ್ಥೆಯನ್ನು ಒಳಗೊಂಡಿದೆ.
ಕರೋನಾ ಹೆಣ ತೆಗೆದುಕೊಳ್ಳಲು ಬರದಂತೆ ಪ್ರತಿಯೊಬ್ಬರಿಗೂ ಪಾಠ ಕಲಿಸಿದೆ. ಜನರು ಜವಾಬ್ದಾರಿಯುತವಾಗಿ ಬದುಕುವ ಮೂಲಕ ಭಾರತವನ್ನು ಕಟ್ಟೋಣ ಎಂದು ಹೇಳಿದರು. ಇದಕ್ಕೂ ಮುನ್ನ ಶಾಲಾ ಕೊಠಡಿ, ಜೀಮ್, ಗ್ರಂಥಾಲಯ, ಕಂಪ್ಯೂಟರ್, ಲ್ಯಾಬ್ ಸೇರಿದಂತೆ ಇತರೆ ಕೊಠಡಿಗಳನ್ನು ವೀಕ್ಷಿಸಿ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಮಾತಾಡಿ 16 ವರ್ಷದ ವಯಸ್ಸಿನ ಒಳಗಾಗಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ ಮುಂದಿನ ಶಿಕ್ಷಣಕ್ಕೆ ಭದ್ರಾ ಬುನಾದಿಯಾಗಿರುತ್ತದೆ ಎಂದರು
ಶಿಕ್ಷಣದ ಮೂಲಕ ದೇಶ ಬದಲಾವಣೆ ಕಾಣಬಹುದು. ರಾಜಕಾರಣಿಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಿದರೆ ಉತ್ತಮ ಸಾಧನೆಗೆ ಸಹಕಾರಿಯಾಗುತ್ತದೆ. ದೇವಸ್ಥಾನಕ್ಕೆ ಕೊಡುವ ಹಣವನ್ನು ಶಾಲೆಗೆ ಬಳಸಿದರೆ ಅನೇಕ ದೇವರುಗಳು ಹೊರ ಬರುತ್ತಾರೆ ಎಂದು ಶಾಸಕಿ ತಿಳಿಸಿದರು.
ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ, ಪ್ರಾಂಶುಪಾಲ ರವೀಶ್, ಮಾತಾಡಿದರು. ಕಾರ್ಯಕ್ರಮದಲ್ಲಿ
ಚಂದ್ರಯ್ಯ, ಎಸ್ಡಿಎಂಸಿ ಅಧ್ಯಕ್ಷ ತಿಮ್ಮಶೇಟ್ರು, ತಿಪ್ಪೇಸ್ವಾಮಿ, ನಾಗರಾಜ್ ಚಾರ್, ದ್ಯಾಮೆಗೌಡ, ಶಾಲೆ ಸಿಬ್ಬಂದಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend