ಚಿತ್ರದುರ್ಗ : ಖಾಸಗಿ ರಾಜ್ ನ್ಯೂಸ್ ಟಿವಿಯ ಕ್ಯಾಮೆರಾ ಮ್ಯಾನ್ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ್ (34) ಉಸಿರಾಟದ ತೊಂದರೆಯಿಂದ ನಿಧನರಾದರು.
ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್
ವಿವಾಹವಾಗಿದ್ದರು. ಅನ್ನೇಹಾಳ್ ಗ್ರಾಮದವರು. ಚಿತ್ರದುರ್ಗದ ದವಳಗಿರಿ ಬಡವಾಣೆಯಲ್ಲಿ ವಾಸವಾಗಿದ್ದು ಕೊಂಡು ಪ್ರಸ್ತುತ ರಾಜ್ ಟಿವಿ ಕ್ಯಾಮೆರಾ ಮ್ಯಾನ್ ಆಗಿ ಕಾರ್ಯನಿರ್ವ ಹಿಸುತ್ತಿದ್ದರು. ಈ ಹಿಂದೆ ಉದಯ ಟಿ.ವಿ, ಚಿತ್ರದುರ್ಗ ಸಿಟಿ ಕೇಬಲ್ , ಕ್ಯಾಮರಾ ಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ.
ನವೆಂಬರ್ ಅಂತ್ಯದಲ್ಲಿ
ಮದುವೆಯಾಗಿ ಇಂದಿಗೆ ಬರೀ ಹತ್ತು ದಿನ ಕಳೆದಿದೆ. ಡಿ. 09 ಇಂದು ಬೆಳಗಿನ ಜಾವ ನಿಧನರಾದರು. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ನಗರದ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಗೆ ತಡರಾತ್ರಿ ಒಂದುಗಂಟೆಗೆ ಕಳುಹಿಸಲಾಗಿತ್ತು.
ಆದರೆ ವಿನಯ್ ಕೊನೆಯುಸಿರೆಳೆದಿದ್ದಾರೆ.
ಇನ್ನೂ ದಾಂಪತ್ಯ ಜೀವನದ ಕನಸು ಹೊತ್ತು ಬಾಳಸಂಗಾತಿಯಾಗಿ ಕೈಹಿಡಿದಿದ್ದ ಆ ಹೆಣ್ಣಿನ ಜೀವನ ಕಣ್ಣಿರಲ್ಲಿದೆ. ವಿನಯ್ ನಿಧನಕ್ಕೆ ಚಿತ್ರದುರ್ಗ ಜಿಲ್ಲೆಯ ಪತ್ರಕರ್ತರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಕಂಬನಿ ಮಿಡಿದಿದ್ದಾರೆ. ಇಂದು ಮಧ್ಯಾನ್ಹ ಸ್ವಗ್ರಾಮ ಅನ್ನೇಹಾಳ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.