ಸೆಪ್ಟೆಂಬರ್ 04 ರಂದು ವಿವಿ ಸಾಗರಕ್ಕೆ ಭದ್ರೆ ನೀರು.

ಚಿತ್ರದುರ್ಗ : ಆಗಸ್ಟ್ 28 ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಕಾಲುವೆ ಮೂಲಕ ಅಜ್ಜಂಪುರ ಸಮೀಪದ ಹೆಬ್ಬೂರು ಮಾರ್ಗವಾಗಿ ವೇದಾವತಿ ನದಿ ಮೂಲಕ ವಿವಿಸಾಗರಕ್ಕೆ ಸೆಪ್ಟೆಂಬರ್ 4 ರಂದು ನೀರು ಹರಿಸಲಾಗುತ್ತಿದೆ ಎಂದು ಭದ್ರಾ ಮೇಲ್ದಂಡೆ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್ ತಿಳಿಸಿದ್ದಾರೆ.ಭದ್ರಾ ಮೇಲ್ದಂಡೆ ಕಾಲುವೆ ಹೆಬ್ಬೂರಿನಿಂದ, ಕಾಟಿಗನೆರೆ,  ಬೆಣ್ಣೆ ಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಹೆಚ್. ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ, ಚೌಳ ಹರಿಯೂರು, ಗ್ರಾಮಗಳ ಹಳ್ಳಗಳ ಮೂಲಕ ಕುಕ್ಕೆ ಸಮುದ್ರ ಕೆರೆಯಿಂದ ವೇದಾವತಿ ನದಿಗೆ ಸೇರಿ, ನಂತರ ನದಿಪಾತ್ರದ ಹಳ್ಳಿಗಳಾದ ಚಿಕ್ಕಬಳ್ಳೆಕೆರೆ, ಬಾಗಶೆಟ್ಟಿಹಳ್ಳಿ, ಕೊರಟಕರೆ, ಬಲ್ಲಾಳ ಸಮುದ್ರ, ಮೆಟ್ಟಿನಹೊಳೆ, ಕೆಲ್ಲೂಡು, ಲಿಂಗದಹಳ್ಳಿ, ಕಾರೇಹಳ್ಳೀ, ಅತ್ತಿಮಗ್ಗೆ, ಬೇವಿನಹಳ್ಳಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಸೇರುತ್ತದೆ.
ಆದ್ದರಿಂದ ಈ ಸರಹದ್ದುಗಳಲ್ಲಿ ಜನ, ಜಾನುವಾರುಗಳು ನದಿ ದಾಟುವಾದಲ್ಲಿ, ಇಳಿಯುವುದಾಗಲಿ ಮಾಡಬಾರದು. ಮತ್ತು ಯಾರೂ ಸಹ ಅನಧಿಕೃತವಾಗಿ ಈ ಮಾರ್ಗದಲ್ಲಿ ಪಂಪ್‍ಸೆಟ್ ಅಳವಡಿಸಿ ನೀರನ್ನು ಎತ್ತಬಾರದು ಎಂದು ಸೂಚನೆ ನೀಡಲಾಗಿದೆ.

Leave a Reply

Your email address will not be published.

Send this to a friend