ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಪ್ರಾಣಾಯಾಮ

ಅಲುಗಾಡುವ ಕೈಗಳನ್ನು ಸಾಮಾನ್ಯವಾಗಿ ಕೈನಡುಕ ಎಂದು ಕರೆಯಲಾಗುತ್ತದೆ. ಕೈನಡುಕವು ಜೀವಕ್ಕೆ ಅಪಾಯಕಾರಿಯಲ್ಲ. ಆದರೆ ಇದು ದೈನಂದಿನ ಕಾರ್ಯವನ್ನು ಮಾಡಲು ಕಷ್ಟಕರವಾಗಿಸುತ್ತದೆ. ಕೆಲವು ನರಗಳು ಕ್ಷೀಣಗೊಳ್ಳುವ ಮುಂಚೆಯೇ ಎಚ್ಚರಿಕೆ ನೀಡುವ ಸಂಕೇತವೂ ಇದಾಗಿರಬಹುದು.ನೀವು ಯೋಗ ಹಾಗೂ ವಿಶ್ರಾಂತಿ ತಂತ್ರಗಳನ್ನು ಮಾಡುವ ಮೂಲಕ ಕೈನಡುಕದ ಪರಿಣಾಮಗಳನ್ನು ತಗ್ಗಿಸಲು ಸಾಧ್ಯವಿದೆ. ನಡುಕಗಳ ತೀವ್ರತೆಯನ್ನು ಕಡಿಮೆ ಮಾಡಲು ಬೆಳಗ್ಗೆ ಮತ್ತು ಸಂಜೆ ಕೇಂದ್ರೀಕೃತ ಉಸಿರಾಟದ ವ್ಯಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ.

ಕೈಗಳನ್ನು ವಿಸ್ತರಿಸುವ ವ್ಯಾಯಾಮ, ಕೈಗಳನ್ನು ಮೇಲಕ್ಕೂ, ಕೆಳಕ್ಕೆ ಅಭ್ಯಾಸ ಮಾಡುವ ವ್ಯಾಯಾಮ, ಆಸನಗಳಲ್ಲಿ ತಾಡಾಸನ, ಪಾರ್ಶ್ವತಾಡಾಸನ, ಪರ್ವತಾಸನ, ಬದ್ಧಕೋಣಾಸನ, ಬದ್ಧಪದ್ಮಾಸನ, ಅಧೋಮುಖ ಶ್ವಾನಾಸನ, ಶಶಾಂಕಾಸನ, ಶವಾಸನಗಳಿಂದ ಸಹಾಯವಾಗುತ್ತದೆ. ಅನುಲೋಮ, ವಿಲೋಮ, ಶೀತಲೀ, ಷಣ್ಮುಖಿ ಮುದ್ರೆಯಲ್ಲಿ ಭ್ರಾಮರಿ ಪ್ರಾಣಾಯಾಮ ಮಾಡಿ. ತಲಾ ಹತ್ತು ನಿಮಿಷ ಬಾಹ್ಯಮುಷ್ಟಿಮುದ್ರೆ, ಹಾಕಿನಿಮುದ್ರೆ, ಹೃದಯ ಮುದ್ರೆ, ಪ್ರಾಣಮುದ್ರೆ ಮಾಡಿ. ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ. ಒಮ್ಮೆ ವೈದ್ಯರೊಂದಿಗೂ ಸಮಾಲೋಚಿಸಿ.

Leave a Reply

Your email address will not be published. Required fields are marked *

Send this to a friend